ಇಸ್ಲಾಂ ಧರ್ಮದಲ್ಲಿ ದೇವರನ್ನು ಸಂಬೋಧಿಸುವ ಪದ. ಮೂಲ ಅರಬ್ಬೀ ಭಾಷೆಯ ಪದ ಅಲ್ ಇಲಾಹ್. ಇಸ್ಲಾಂ ಪೂರ್ವದಲ್ಲಿಯೇ ಈ ಪದ ಅರಬ್ಬರಲ್ಲಿ ಪ್ರಚಾರದಲ್ಲಿತ್ತು. ಅವರು ಪೂಜಿಸುತ್ತಿದ್ದ ಮೂರ್ತಿಗಳಲ್ಲಿ ಅಲ್ಲನ ಮೂರ್ತಿಯೇ ಪ್ರಮುಖ ವಾಗಿತ್ತು. ಇಸ್ಲಾಂ ಧರ್ಮ ಬಂದ ಮೇಲೆ ಈ ಪದಕ್ಕೆ ವಿಶಾಲವಾದ ಅರ್ಥ ಬಂತು. ಮುಸಲ್ಮಾನರಲ್ಲದೆ ಅರಬ್ಬೀ ಮಾತನಾಡುವ ಕ್ರಿಶ್ಚಿಯನ್ ದೇಶಗಳಲ್ಲೂ ಈ ಪದ ಬಳಕೆಯಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ